ಹಲ್ಲುಗಳ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿದಿನ ಹಲ್ಲುಜ್ಜುವುದರ ಜೊತೆಗೆ ಟೂತ್ಬ್ರಷ್ ಅನ್ನು ಸರಿಯಾದ ಸಮಯಕ್ಕೆ ಬದಲಾಯಿಸುವುದು ಮುಖ್ಯ. ಸಾಮಾನ್ಯವಾಗಿ ಪ್ರತಿ ಮೂರುರಿಂದ ನಾಲ್ಕು ತಿಂಗಳಿಗೊಮ್ಮೆ ಹೊಸ ಬ್ರಷ್ ಬಳಸುವಂತೆ ದಂತ ತಜ್ಞರು ಶಿಫಾರಸು ಮಾಡುತ್ತಾರೆ. ಬ್ರಷ್ನ ನಾರುಗಳು ಬಾಗುವುದು, ಮುರಿಯುವುದು ಅಥವಾ ಸವೆದು ಹೋಗುವುದು ಕಂಡುಬಂದರೆ ತಕ್ಷಣ ಬದಲಾಯಿಸಬೇಕು. ಸರಿಯಾದ ಬ್ರಷ್ ಬಳಕೆಯ ಮೂಲಕ ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹಲ್ಲುಗಳ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿದಿನ ಎರಡು ಬಾರಿ ಹಲ್ಲುಜ್ಜುವುದು ಎಷ್ಟು ಮುಖ್ಯವೋ, ಬಳಸುವ ಟೂತ್ಬ್ರಷ್ ಅನ್ನು ಸರಿಯಾದ ಸಮಯಕ್ಕೆ ಬದಲಾಯಿಸುವುದೂ ಅಷ್ಟೇ ಮುಖ್ಯ.