ಮೈಸೂರಿನ ಡಾ. ರಮ್ಯಾ ಬರೆದ ಚಲಿಸುವ ಬಂಡೆ ಡಿ.ಕೆ. ಶಿವಕುಮಾರ್ ಪುಸ್ತಕ ಲೋಕಾರ್ಪಣೆಯಾಗಿದೆ. ಇದು ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಹೋರಾಟ, ಸಂಕಷ್ಟಗಳು ಹಾಗೂ ಸಿಎಂ ಪಟ್ಟಕ್ಕೇರಿದ ಪಯಣವನ್ನು ವಿವರಿಸುತ್ತದೆ. ಸ್ವತಃ ಡಿ.ಕೆ. ಶಿವಕುಮಾರ್ ಅವರು ಭವಿಷ್ಯದಲ್ಲಿ ತಮ್ಮದೇ ಪುಸ್ತಕ ಬರೆಯುವ ಸುಳಿವು ನೀಡಿರುವುದು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ. ಮೈಸೂರು, ನವೆಂಬರ್ 12: ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ. ಶಿವಕುಮಾರ್ ಅವರ ರಾಜಕೀಯ ಜೀವನದ ಕುರಿತಾದ ಈ ಪುಸ್ತಕವು, ಡಾ. ರಮ್ಯಾ ಅವರ ಐದು ವರ್ಷಗಳ ಹಿಂದಿನ ಪಿಎಚ್ಡಿ ಸಂಶೋಧನಾ ಪ್ರಬಂಧವನ್ನು ಆಧರಿಸಿದೆ. ಒಟ್ಟು ಹತ್ತು ವರ್ಷಗಳ ಸಂಶೋಧನೆಯ ಫಲವಾಗಿ ಈ ಕೃತಿ ಹೊರಬಂದಿದೆ.