ಮಂಜ ಇದ್ದಲ್ಲಿ ಜಗಳ ಗ್ಯಾರಂಟಿ. ಮಾತಿನ ಕಾರಣಕ್ಕಾಗಿಯೇ ಜಗಳ ಆಗುತ್ತದೆ. ಈ ವಾರ ಬಿಗ್ ಬಾಸ್ ಮನೆಯಲ್ಲಿ ರಾಜಕೀಯದ ಥೀಮ್ನಲ್ಲಿ ಟಾಸ್ಕ್ ನಡೆಯುತ್ತಿದೆ. ಮಂಜ ಅವರು ಅಧ್ಯಕ್ಷ ಆಗಿದ್ದಾರೆ. ಅದರಿಂದ ಅನೇಕರಿಗೆ ಅಸಮಾಧಾನ ಇದೆ. ಆಟದ ಬಗ್ಗೆ ಚರ್ಚೆ ಮಾಡುವಾಗ ಮಂಜ ಅವರು ನಾಲಿಗೆ ಹರಿಬಿಟ್ಟಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ ಮೂರನೇ ಟಾಸ್ಕ್ ರದ್ದಾಗಿದೆ. ರಾಜಕೀಯದ ಥೀಮ್ನಲ್ಲಿ ಬಿಗ್ ಬಾಸ್ ನೀಡಿದ್ದ ಟಾಸ್ಕ್ ನಿಭಾಯಿಸಲು ಸ್ಪರ್ಧಿಗಳು ಎಡವಿದ್ದಾರೆ. ಕಷ್ಟಪಟ್ಟು ಟಾಸ್ಕ್ ಆಡಿದ್ದರೂ ಕೂಡ ಯಾವ ಟೀಮ್ ವಿನ್ ಆಗಿದೆ ಎಂಬುದನ್ನು ಘೋಷಿಸಲು ಸ್ಪರ್ಧಿಗಳು ಸೋತಿದ್ದಾರೆ. ಹಾಗಾಗಿ ಟಾಸ್ಕ್ ರದ್ದು ಮಾಡುವುದಾಗಿ ಬಿಗ್ ಬಾಸ್ ಘೋಷಿಸಿದ್ದಾರೆ.