ಲಂಡನ್ ಮದುಮಗ; ಅಸಲಿಗೆ ಕೋಳಿ ಅಂಗಡಿ ಕೆಲಸಗಾರ! ಸತ್ಯ ತಿಳಿದು ಮದುವೆ ಕ್ಯಾನ್ಸಲ್ ಮಾಡಿದ ಪೋಷಕರು, ಯುವತಿ ಆತ್ಮಹತ್ಯೆ. ತಿರುವಾರೂರು: ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲೂ ಒಂದು ಸುಂದರ ಘಟ್ಟ. ತಮ್ಮ ಮಗಳಿಗೆ ಒಬ್ಬ ಒಳ್ಳೆಯ, ಸುಶಿಕ್ಷಿತ ಹಾಗೂ ಕೈತುಂಬಾ ಸಂಪಾದಿಸುವ ವರನನ್ನ ತಂದುಕೊಡಬೇಕು ಎಂಬುದು ಎಲ್ಲಾ ಪೋಷಕರ ಕನಸಾಗಿರುತ್ತದೆ. ತಮಿಳುನಾಡಿನ ತಿರುವಾರೂರಿನಲ್ಲೂ ಒಂದು ಕುಟುಂಬ ತಮ್ಮ ಮಗಳಿಗೆ ಲಂಡನ್ ಹುಡುಗ ಸಿಕ್ಕಿದ್ದಾನೆ ಎಂದು ಅತೀವ ಸಂತಸದಲ್ಲಿತ್ತು. ಆದರೆ, ಆ ಸಂತೋಷ ಹೆಚ್ಚು ದಿನ ಉಳಿಯಲಿಲ್ಲ. ಹೌದು.