ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ: INDIA ಒಕ್ಕೂಟದ ಹೋರಾಟಕ್ಕೆ CJP ಸಾಥ್, ಅ.10 ಕ್ಕೆ ಬೃಹತ್ ಪ್ರತಿಭಟನೆ. ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಇಂಡಿಯಾ ಮೈತ್ರಿಕೂಟ ನಡೆಸಲು ಉದ್ದೇಶಿಸಿರುವ ಪ್ರತಿಭಟನೆಯನ್ನ ಕಾಕ್ರೋಚ್ ಜನತಾ ಪಾರ್ಟಿ ಸ್ವಾಗತಿಸಿದೆ. ಅಲ್ಲದೆ, ಅಕ್ಟೋಬರ್ 10 ರಂದು ನವದೆಹಲಿಯ ಜಂತರ್ ಮಂತರ್ನಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನೆಯು ಕೇವಲ ತಮ್ಮ ಪಕ್ಷದ ಕರೆಯಲ್ಲ, ಬದಲಾಗಿ ಅದು ಯುವಜನತೆಯ ಹಾಗೂ ಜೆನ್ ಝೀ' ಯುವಕರ ಕರೆ ಎಂದು.