ಉದ್ಯೋಗ ಕಳೆದುಹೋದ್ರೆ ಮುಂದೇನು ಎನ್ನುವ ಪ್ರಶ್ನೆ ಕಾಡುವುದು ಸಹಜ. ಆದಾಯದ ಮೂಲವೇ ಕುಸಿದಾಗ ಚಿಂತೆ ಕಾಡುತ್ತದೆ. ಇಲ್ಲೊಬ್ಬ ಯುವಕನನ್ನು ಕಾರ್ಪೊರೇಟ್ ಕಂಪನಿ ಕೆಲ್ಸದಿಂದ ತೆಗೆದುಹಾಕಿದೆ. ಜಾಬ್ ಗೆ ಅರ್ಜಿ ಸಲ್ಲಿಸಿದ್ರೂ ಕೆಲಸ ಸಿಗದ ಕಾರಣ ಪಾತ್ರೆ ತೊಳೆಯುವ ಕೆಲಸಕ್ಕೆ ಕೈ ಹಾಕಿದ್ದಾನೆ. ಈ ಕುರಿತಾದ ಪೋಸ್ಟ್ ಸದ್ಯ ವೈರಲ್ ಆಗಿದ್ದು ನೆಟ್ಟಿಗರ ಗಮನ ಸೆಳೆದಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ. ಕಾರ್ಪೊರೇಟ್ ಕಂಪನಿಯಲ್ಲಿ (corporate company) ಕೆಲಸ ಅಂದ್ರೆ ಹಾಗೆನೇ, ಕತ್ತೆ ತರಹ ದುಡಿದ್ರೂ ಬೆಲೆ ಇಲ್ಲ. ಕೆಲಸದಿಂದ ಯಾವಾಗ ತೆಗೆದು ಹಾಕುತ್ತಾರೆ ಅನ್ನೋದು ತಿಳಿದಿರಲ್ಲ. ಇದೀಗ 29 ವರ್ಷದ ಯುವಕನೊಬ್ಬ ಕೆಲಸ ಕಳೆದುಕೊಂಡಿದ್ದಾನೆ.