ಯುವನ್ ಶಂಕರ್ ರಾಜಾ ಕಾನ್ಸರ್ಟ್ ಕಾರ್ಯಕ್ರಮವು ಡಿಸೆಂಬರ್ 5ರಂದು ಬೆಂಗಳೂರಿನ ನೈಸ್ ಗ್ರೌಂಡ್ಸ್ನಲ್ಲಿ ಅತ್ಯಂತ ಅದ್ಧೂರಿಯಾಗಿ ನಡೆಯಲಿದೆ. ನಾಯ್ಸ್ ಎಂಟರ್ಟೈನ್ಮೆಂಟ್ ಸಂಸ್ಥೆಯ 'U1niverse ಟೂರ್' ಅಡಿಯಲ್ಲಿ ಸತತ ನಾಲ್ಕು ಗಂಟೆಗಳ ಕಾಲ ಈ ಸಂಗೀತ ರಸದೌತಣ ಜರುಗಲಿದೆ. ವರ್ಷಾಂತ್ಯದ ಸಂಭ್ರಮದಲ್ಲಿರುವ ಉದ್ಯಾನನಗರಿ ಬೆಂಗಳೂರಿನ ಸಂಗೀತ ಪ್ರಿಯರಿಗೆ ಭರ್ಜರಿ ರಸದೌತಣ ನೀಡಲು ಬೃಹತ್ ಸಂಗೀತ ಕಾರ್ಯಕ್ರಮವೊಂದು ಸಿದ್ಧಗೊಂಡಿದೆ. ಈಗಾಗಲೇ ಹಲವು ಯಶಸ್ವಿ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಿ ಹೆಸರು ಮಾಡಿರುವ ಬೆಂಗಳೂರು ಮೂಲದ ‘ನಾಯ್ಸ್ ಎಂಟರ್ಟೈನ್ಮೆಂಟ್’ ಸಂಸ್ಥೆಯು ‘U1niverse ಟೂರ್’ ಎಂಬ ವಿನೂತನ ಪರಿಕಲ್ಪನೆಯಡಿಯಲ್ಲಿ ಈ ಮೆಗಾ ಕಾನ್ಸರ್ಟ್ ಹಮ್ಮಿಕೊಂಡಿದೆ.