ಒಳ್ಳೆಯ ಮನಸ್ಸಿನ ವ್ಯಕ್ತಿಗಳಿಗೆ ಯಾವಾಗಲೂ ಕೆಟ್ಟದ್ದೇ ಸಂಭವಿಸುತ್ತದೆ, ಅವರಿಗೆ ಯಾವಾಗಲೂ ನೋವೇ ಉಂಟಾಗುತ್ತದೆ ಎಂದು ಹೇಳುವ ಮಾತನ್ನು ನೀವು ಕೂಡ ಕೇಳಿರುತ್ತೀರಿ ಅಲ್ವಾ. ಒಳ್ಳೆಯ ಮನಸ್ಸಿರುವ ಅನೇಕರ ಜೀವನದಲ್ಲಿ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಅಷ್ಟಕ್ಕೂ ಈ ಒಳ್ಳೆಯವರಿಗೆ ಯಾವಾಗ್ಲೂ ಕಷ್ಟ, ನೋವುಗಳೇ ಜಾಸ್ತಿಯೇಕೆ, ಇದರ ಹಿಂದಿರುವ ಕಾರಣವಾದರೂ ಏನು ಎಂಬುದನ್ನು ತಿಳಿದುಕೊಳ್ಳಿ. ಯಾಕೆ ನಮ್ಮಂತಹ ಒಳ್ಳೆಯವರಿಗೆ (good people) ಆ ದೇವರು ಯಾವಾಗ್ಲೂ ನೋವು ಕೊಡ್ತಾನೆ, ಈ ಕೆಟ್ಟ ಜನಗಳು ಆರಾಮವಾಗಿ ಜೀವನ ನಡೆಸುತ್ತಾರಲ್ಲ ಯಾಕೆ ಹೀಗೆ ಎಂಬ ಪ್ರಶ್ನೆ ನಿಮ್ಮ ಮನಸ್ಸಿಗೂ ಬಂದಿರಬಹುದಲ್ವಾ. ಹೆಚ್ಚಿನ ಸಂದರ್ಭದಲ್ಲಿ ಒಳ್ಳೆಯ ಮನಸ್ಸಿನ ಜನರಿಗೆ ನೋವು, ಕಷ್ಟಗಳೇ ಜಾಸ್ತಿ ಲಭಿಸುತ್ತವೆ.