ದುಡಿದ ದುಡ್ಡನ್ನೆಲ್ಲಾ ಖರ್ಚು ಮಾಡೋ ಬದಲು ಉಳಿತಾಯ ಮಾಡೋ ಬಹಳ ಮುಖ್ಯ. ಇದು ಭವಿಷ್ಯದ ದೃಷ್ಟಿಯಿಂದ ಒಳ್ಳೆಯದು. ಮಾಸಿಕ ಆದಾಯಕ್ಕೆ ತಕ್ಕಂತೆ ಬಜೆಟ್ ಪ್ಲ್ಯಾನ್ ಮಾಡಿ ಸೇವಿಂಗ್ ಗೆ ಆದ್ಯತೆ ನೀಡಿ. ಅನಗತ್ಯ ಖರ್ಚುಗಳಿಗೆ ಕಡಿವಾಣವಿರಲಿ , ತುರ್ತು ನಿಧಿಯಂತಹ ಕೆಲ ಸಣ್ಣ ಟಿಪ್ಸ್ ಗಳು ನಿಮ್ಮ ಕೈಯಲ್ಲಿ ದುಡ್ಡು ಉಳಿಯುವಂತೆ ಮಾಡುತ್ತದೆ. ಆರ್ಥಿಕ ಪರಿಸ್ಥಿತಿ ಹದಗೆಟ್ಟಾಗ ಚೇತರಿಸಿಕೊಳ್ಳಲು ಸಹಾಯಕವಾಗಿದೆ. ಆದ್ರೆ, ಉಳಿತಾಯ (saving) ಮಾಡುವುದು ಜೀವನದಲ್ಲಿ ಅತ್ಯಂತ ಮುಖ್ಯವಾದದ್ದು. ಇದು ಭವಿಷ್ಯದ ಸುರಕ್ಷತೆ ಮತ್ತು ಆರ್ಥಿಕ ಸ್ವಾತಂತ್ರ್ಯಕ್ಕೆ ಭದ್ರ ಬುನಾದಿಯಾಗಿದೆ. ತುರ್ತು ಪರಿಸ್ಥಿತಿಗಳಿಗೆ ಆಧಾರವಾಗಿದ್ದು, ಸಾಲ ಪಡೆಯಬೇಕಾದ ಸಂದರ್ಭ ಎದುರಾದರೆ ಕೈಯಲ್ಲಿದ್ದ ಉಳಿತಾಯ ಹಣವನ್ನೇ ಬಳಸಿಕೊಳ್ಳಬಹುದು.