ಶಿವಮೊಗ್ಗ: ಬಹು ನಿರೀಕ್ಷೆಯೊಂದಿಗೆ ಮೂರು ವರ್ಷಗಳ ಹಿಂದೆ ಶಿವಮೊಗ್ಗ ಏರ್ಪೋರ್ಟ್ನಿಂದ ಆರಂಭವಾಗಿದ್ದ ವಿಮಾನಗಳ ಸಂಚಾರ ಇದೇ ತಿಂಗಳ 21ಕ್ಕೆ ಸ್ಥಗಿತವಾಗಲಿದೆ. ಪ್ರಸ್ತುತ ಈ ನಿಲ್ದಾಣದಿಂದ ಕಾರ್ಯನ. ಪ್ರಸ್ತುತ ಈ ನಿಲ್ದಾಣದಿಂದ ಕಾರ್ಯನಿರ್ವಹಿಸುತ್ತಿರುವ ಸ್ಟಾರ್ ಏರ್ಲೈನ್ ತನ್ನ ಸೇವೆಯನ್ನು ನಿಲ್ಲಿಸಲಿದೆ.ಕೇಂದ್ರ ಸರ್ಕಾರದ ಉಡಾನ್ ಯೋಜನೆಯ ಒಪ್ಪಂದ ಮುಕ್ತಾಯವಾಗಿದೆ. ಜತೆಗೆ ರಾಜ್ಯ ಸರ್ಕಾರ ವಿಜಿಎಫ್ (ವಯಾಬಿಲಿಟಿ ಗ್ಯಾಪ್ ಫಂಡಿಂಗ್) ಕೂಡಾ ಬಿಡುಗಡೆ ಮಾಡಿಲ್ಲ. ಹಾಗೆಯೇ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿ ವಿಮಾನ ಕಂಪನಿಗಳು ನಷ್ಟ ಅನುಭವಿಸುತ್ತಿವೆ. ಈ ಎಲ್ಲ ಕಾರಣಗಳಿಂದ ಶಿವಮೊಗ್ಗ ಏರ್ಪೋರ್ಟ್ನಲ್ಲಿ ಲೋಹದ ಹಕ್ಕಿಗಳ ಕಲರವ ಸದ್ಯಕ್ಕೆ ಕೊನೆಗೊಳ್ಳಲಿದೆ.