ಹುಬ್ಬಳ್ಳಿ: ಅಪಹರಣಕ್ಕೊಳಗಾದ ವ್ಯಕ್ತಿಯನ್ನು ಕೇವಲ ಎರಡು ಗಂಟೆಯೊಳಗೆ ಪತ್ತೆಹಚ್ಚಿ ರಕ್ಷಿಸುವಲ್ಲಿ ಇಲ್ಲಿಯ ಗೋಕುಲ ರೋಡ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.ಬುಧವಾರ ರಾತ್ರಿ 9.45ರ ಸುಮಾರಿಗೆ ಸ. ಅಪಹರಣ ಮಾಡಿದ್ದ ಬೆಳಗಾವಿಯ ಶಿವಕುಮಾರ ಹಿರೇಮಠ, ಬೈಲಹೊಂಗಲದ ಮಂಜುನಾಥ ಕರಡಿ ಅವರನ್ನು ಬಂಧಿಸಿದೆ. ಗೋಕುಲ ರೋಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಬಸವರಾಜ ಬೆಳಗಲಿ, ವಸಂತ ಗುಡಿಗೇರಿ, ಸುನಿಲ್ ಲಮಾಣಿ, ಚಂದ್ರು ಹಿರೇಮಠ, ರುದ್ರಪ್ಪ ಹೊರಟ್ಟಿ ಹಾಗೂ ಧರೇಶ ಬೆಂಡಿಗೇರಿ, ಮಲ್ಲರೆಡ್ಡಿ ಬೆನ್ನೂರು ಇದ್ದರು.ಹಣದ ವ್ಯವಹಾರವೇ ಕಾರಣ: ಸುರೇಶ ಪೂಜಾರಿ ವೈದ್ಯರೊಬ್ಬರ ಹತ್ತಿರ ಕೆಲಸ ಮಾಡುತ್ತಿದ್ದಾನೆ. ಮಧ್ಯವರ್ತಿಯಾಗಿದ್ದ ಸುರೇಶ ವೈದ್ಯರೊಬ್ಬರಿಂದ ಹಣ ಪಡೆದು ವಂಚಿಸಿದ್ದ ಎಂಬ ಆರೋಪವಿದೆ.