ಮೈಸೂರಿನಲ್ಲಿ ರಾಪಿಡೋ ಚಾಲಕನೊಬ್ಬ ಮಹಿಳೆಯೊಬ್ಬರ ಜತೆ ದೂರವಾಣಿಯಲ್ಲಿ ಅಸಭ್ಯವಾಗಿ ವರ್ತಿಸಿ, ಅಶ್ಲೀಲ ಪದಗಳನ್ನು ಬಳಸಿ ಮಾತನಾಡಿರುವ ಆರೋಪ ಕೇಳಿಬಂದಿದೆ. ಯುವತಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿದ್ದು, ಮಹಿಳೆಯರು ದ್ವಿಚಕ್ರ ವಾಹನ ರಾಪಿಡೋ ಬುಕ್ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ. ಈ ಘಟನೆ ಕುರಿತು ಪೊಲೀಸರು ತನಿಖೆ ನಡೆಸಬೇಕಿದೆ. ಮೈಸೂರು, ನವೆಂಬರ್ 12: ಮೈಸೂರಿನಲ್ಲಿ ರಾಪಿಡೋ ಚಾಲಕನೊಬ್ಬ ಯುವತಿಯೊಬ್ಬರ ಜತೆ ಅಶ್ಲೀಲ ಪದಗಳನ್ನು ಬಳಸಿ ದೂರವಾಣಿ ಕರೆಯಲ್ಲಿ ಮಾತನಾಡಿರುವ ಗಂಭೀರ ಆರೋಪ ಕೇಳಿಬಂದಿದೆ. ಕುವೆಂಪು ನಗರದಲ್ಲಿ ನಡೆದ ಈ ಘಟನೆ ಕುರಿತು ಯುವತಿ ತನಗಾದ ಅನುಭವವನ್ನು ವಿಡಿಯೋ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.