‘ರಾಮಾಯಣ’ ಸಿನಿಮಾದ ಕಾರಣಕ್ಕೆ ಹಲವು ಸಿನಿಮಾಗಳು ಪಕ್ಕಕ್ಕೆ ಸರಿದವೆ. ‘ರಾಮಾಯಣ’ ಸಿನಿಮಾ ಬಿಡುಗಡೆಗೆ ಮುಂಚೆ ಕೆಲವು ಸಿನಿಮಾಗಳು ಚಿತ್ರಮಂದಿರದಲ್ಲಿ ಒಳ್ಳೆ ಪ್ರದರ್ಶನ ಕಾಣುತ್ತಿದ್ದವು. ‘ರಾಮಾಯಣ’ ಸಿನಿಮಾ ರಿಲೀಸ್ ಬಳಿಕ ಆ ಸಿನಿಮಾಗಳು ಸಹ ಪಕ್ಕಕ್ಕೆ ತಳ್ಳಲ್ಪಟ್ಟವು. ಅವುಗಳಲ್ಲಿ ಒಂದು ಬಹಳ ಸಣ್ಣ ಸಿನಿಮಾ ‘ಪೈರ್’. ‘ರಾಮಾಯಣ’ ಸಿನಿಮಾ ವಿಶ್ವದಾದ್ಯಂತ ಭಾರಿ ಅದ್ಧೂರಿಯಾಗಿ ರಿಲೀಸ್ ಆಗಿದೆ. ಭಾರತದಲ್ಲೂ ಸಹ ಅಭೂತಪೂರ್ವ ಬಿಡುಗಡೆಯನ್ನು ಕಂಡಿದ್ದ ಸಿನಿಮಾ ಅದ್ಧೂರಿ ಪ್ರದರ್ಶನ ಕಾಣುತ್ತಿದೆ. ಕೇವಲ ಒಂದೇ ವಾರದಲ್ಲಿ 1000 ಕೋಟಿ ಗಳಿಕೆಯ ಗಡಿ ತಲುಪಿದೆ. ವಿನೋದ್ ಕಾಪ್ರಿ ಅವರ ಹೊಸ ಚಲನಚಿತ್ರವಾದ ‘ಪೈರ್’ ಕೆಲ ದಿನಗಳ ಹಿಂದೆ ಬಿಡುಗಡೆ ಆಗಿತ್ತು.