ಮುಂಬೈ ರೈಲಿನಲ್ಲಿ ಮಹಿಳೆಗೆ ಕಿರುಕುಳ ನೀಡಿದ್ದ ವ್ಯಕ್ತಿಯೊಬ್ಬ ಆಕೆಯನ್ನು ರೈಲಿನಿಂದ ತಳ್ಳಿದ ಭೀಕರ ಘಟನೆ ನೈಗಾಂವ್ನಲ್ಲಿ ನಡೆದಿದೆ. ಮುಂಬೈ, ನವೆಂಬರ್ 12: ಛೀ ಮುಟ್ಬೇಡಿ ಅಸಹ್ಯವಾಗುತ್ತೆ ದೂರ ಹೋಗಿ ಎಂದಿದ್ದಕ್ಕೆ ವ್ಯಕ್ತಿಯೊಬ್ಬ ಮಹಿಳೆಯನ್ನು ರೈಲಿನಿಂದ ಹೊರಗೆ ತಳ್ಳಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಮಹಿಳೆಯನ್ನು ಅನುಚಿತವಾಗಿ ಸ್ಪರ್ಶಿಸಲು ಬಂದ ವ್ಯಕ್ತಿಯನ್ನು ದೂರ ಹೋಗು ಎಂದಿದ್ದಕ್ಕೆ ಕೋಪಗೊಂಡು ಚಲಿಸುತ್ತಿದ್ದ ರೈಲಿನಿಂದ ಆಕೆಯನ್ನು ತಳ್ಳಿದ್ದಾನೆ. ಪರಿಣಾಮ ಮಹಿಳೆಯ ಎಡಗೈ ಮೊಣಕೈ ಸಮೀಪದಿಂದ ಕತ್ತರಿಸಿ ಹೋಗಿದ್ದು, ತಲೆಗೆ 16 ಹೊಲಿಗೆ ಹಾಕಲಾಗಿದೆ. ಈ ಘಟನೆ ಮುಂಬೈನ ನೈಗಾಂವ್ ರೈಲು ನಿಲ್ದಾಣದ ಬಳಿ ನಡೆದಿದೆ.