ದುನಿಯಾ ವಿಜಯ್, ಇದೀಗ ಕನ್ನಡದ ನಟರಷ್ಟೆ ಅಲ್ಲ, ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿಯೂ ಸಹ ದುನಿಯಾ ವಿಜಯ್ ನಟನೆ ಮಾಡಿದ್ದಾರೆ. ಅವರ ಫಿಟ್ನೆಸ್ ಮತ್ತು ನಟನೆಗೆ ದೊಡ್ಡ ಅಭಿಮಾನಿಗಳಿದ್ದಾರೆ. ಆದರೆ ಇದೀಗ ತಮಿಳು ಚಿತ್ರರಂಗದ ನಟನೊಬ್ಬ, ದುನಿಯಾ ವಿಜಯ್ ಬಗ್ಗೆ ಕೀಳಾಗಿ ಮಾತನಾಡಿ ಅವಮಾನ ಮಾಡಿದ್ದಾರೆ. ದುನಿಯಾ ವಿಜಯ್, ಕನ್ನಡದ ಜನಪ್ರಿಯ ನಟರಲ್ಲಿ ಒಬ್ಬರು. ದಶಕಗಳಿಂದಲೂ ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಾ ಬಂದಿರುವ ದುನಿಯಾ ವಿಜಯ್ ಅವರಿಗೆ ಪ್ರತ್ಯೇಕ ಅಭಿಮಾನಿ ವರ್ಗವೇ ಇದೆ. ನಿರ್ದೇಶಕರಾಗಿಯೂ ಸಹ ದುನಿಯಾ ವಿಜಯ್ ಯಶಸ್ವಿ ಆಗಿದ್ದಾರೆ. ಇತ್ತೀಚೆಗಷ್ಟೆ ದುನಿಯಾ ವಿಜಯ್ ಅವರು ತಮಿಳಿನ ‘ಮೂಕುತ್ತಿ ಅಮ್ಮನ್ 2’ ಸಿನಿಮಾನಲ್ಲಿ ನಟನೆ ಮಾಡಿದ್ದಾರೆ.