ಕಳೆದ 25 ವರ್ಷಗಳಲ್ಲಿ ಮಾಧ್ಯಮ ಮತ್ತು ರಾಜಕೀಯ ಕ್ಷೇತ್ರಗಳು ತಂತ್ರಜ್ಞಾನದ ಪ್ರಭಾವದಿಂದ ಆಮೂಲಾಗ್ರವಾಗಿ ಬದಲಾಗಿವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಫ್ಯಾಕ್ಸ್ ಯಂತ್ರದಿಂದ ಇನ್ಸ್ಟಾಗ್ರಾಂ ರೀಲ್ಸ್ವರೆಗಿನ ಈ ಪಯಣದಲ್ಲಿ, ಸಂವಹನ ಸುಲಭವಾಗಿದೆ. 2047ರ ವಿಕಸಿತ ಭಾರತದ ಗುರಿಯೊಂದಿಗೆ, ಚಂದ್ರಯಾನ-3, ಮೂಲಸೌಕರ್ಯ ಅಭಿವೃದ್ಧಿಯಂತಹ ಭಾರತದ ಸಾಧನೆಗಳನ್ನು ಅವರು ಉಲ್ಲೇಖಿಸಿದ್ದಾರೆ. ನವದೆಹಲಿ, ನವೆಂಬರ್ 12: ಒಂದು ಕಾಲದಲ್ಲಿ ಪತ್ರಿಕಾ ಪ್ರಕಟಣೆ ಕಳುಹಿಸಲು ಫ್ಯಾಕ್ಸ್ ಯಂತ್ರ ಹುಡುಕಬೇಕಿತ್ತು. ಆದರೆ ಇಂದು ಮೊಬೈಲ್ ಫೋನ್ನಲ್ಲೇ ಸುದ್ದಿ, ಫೋಟೋ, ವಿಡಿಯೋ ಕ್ಷಣಾರ್ಧದಲ್ಲಿ ಜಗತ್ತಿನಾದ್ಯಂತ ತಲುಪುತ್ತದೆ. ಕಳೆದ 25 ವರ್ಷಗಳಲ್ಲಿ ರಾಜಕೀಯ ಮಾತ್ರವಲ್ಲ, ಮಾಧ್ಯಮದ ಸ್ವರೂಪವೂ ಸಂಪೂರ್ಣ ಬದಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.