ಪರಪ್ಪನ ಅಗ್ರಹಾರ ಜೈಲಿನಿಂದ ಪೆರೋಲ್ ಮೇಲೆ ಹೋಗಿದ್ದ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಅಸ್ಸಾಂ ಮೂಲದ ಖೈದಿ ಹುಸೇನ್ ಅಲಿಯಾಸ್ ನಸ್ರುಲ್ ಹುಸೇನ್ ತಲೆಮರೆಸಿಕೊಂಡಿದ್ದಾನೆ. ಸೆಪ್ಟೆಂಬರ್ 8ರಂದು ಜೈಲಿಗೆ ಶರಣಾಗಬೇಕಿದ್ದ ಕೈದಿ ಪರಾರಿಯಾಗಿದ್ದು, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಆನೇಕಲ್, ನವೆಂಬರ್ 12: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಪೆರೋಲ್ ಮೇಲೆ ಬಿಡುಗಡೆಯಾಗಿದ್ದ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿಯೊಬ್ಬ ತಲೆಮರೆಸಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಅಸ್ಸಾಂ ಮೂಲದ ಹುಸೇನ್ ಅಲಿಯಾಸ್ ನಸ್ರುಲ್ ಹುಸೇನ್ ಎಂಬಾತ ಪೆರೋಲ್ ಅವಧಿ ಮುಗಿದಿದ್ದರೂ ಜೈಲಿಗೆ ವಾಪಸ್ಸ್ ಆಗದೆ ಪರಾರಿಯಾಗಿದ್ದಾನೆ.