Gold Price 12 November 2026: ಚಿನ್ನದ ಬೆಲೆ ಸತತ ಇಳಿಕೆಯಾಗುತ್ತಿದೆ. ಗುರುವಾರ ಇದರ ಬೆಲೆ ಗ್ರಾಮ್ಗೆ 200 ರೂ ತಗ್ಗಿದೆ. ಆಭರಣ ಚಿನ್ನದ ಬೆಲೆ 13,015 ರೂನಿಂದ 12,815 ರೂಗೆ ಇಳಿದಿದೆ. ಅಪರಂಜಿ ಚಿನ್ನದ ಬೆಲೆ 13,980 ರೂ ಆಗಿದೆ. ಬೆಳ್ಳಿ ಬೆಲೆ ಬೆಂಗಳೂರು ಮೊದಲಾದೆಡೆ ಗ್ರಾಮ್ಗೆ 200 ರೂ ಇದೆ. ಚೆನ್ನೈ ಮೊದಲಾದೆಡೆ ಬೆಲೆ 200 ರೂ ಇದೆ. ನವದೆಹಲಿ, ನವೆಂಬರ್ 12: ಬಂಗಾರದ ಬೆಲೆಯ ಸತತ ಇಳಿಕೆ ಮುಂದುವರಿದಿದೆ. ಕಳೆದ ಎರಡು ದಿನದಲ್ಲಿ ಗ್ರಾಮ್ಗೆ 240 ರೂನಷ್ಟು ಕುಸಿದಿದ್ದ ಚಿನ್ನದ ಬೆಲೆ ಇವತ್ತು ಗುರುವಾರ 200 ರೂ ತಗ್ಗಿದೆ.