ಭಾರತ ವಿರುದ್ಧದ ಏಕದಿನ ಸರಣಿಯ ಕೊನೆಯ ಎರಡು ಪಂದ್ಯಗಳಿಗೆ ನ್ಯೂಜಿಲೆಂಡ್ ತಂಡ ಪ್ರಕಟವಾಗಿದೆ. ದೇಶೀಯ ಕ್ರಿಕೆಟ್ನಲ್ಲಿ 5 ಎಸೆತಗಳಲ್ಲಿ 5 ವಿಕೆಟ್ ಪಡೆದು ವಿಶ್ವದಾಖಲೆ ನಿರ್ಮಿಸಿದ್ದ ಬ್ರೆಟ್ ರಾಂಡೆಲ್ಗೆ ಮೊದಲ ಬಾರಿಗೆ ರಾಷ್ಟ್ರೀಯ ತಂಡದಲ್ಲಿ ಅವಕಾಶ ನೀಡಲಾಗಿದೆ. ಜೊತೆಗೆ ಜೋಶ್ ಕ್ಲಾರ್ಕ್ಸನ್ ಕೂಡ ತಂಡ ಸೇರಿದ್ದಾರೆ. ಕೈಲ್ ಜೇಮಿಸನ್, ಮ್ಯಾಟ್ ಹೆನ್ರಿ ಬದಲಿಗೆ ಇವರು ತಂಡಕ್ಕೆ ಬಂದಿದ್ದಾರೆ. ನಾಲ್ಕನೇ ಹಾಗೂ ಐದನೇ ಏಕದಿನ ಪಂದ್ಯಗಳ ತಂಡದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿರುವ ಕಿವೀಸ್ ಪಡೆ, ಒಂದೇ ಓವರ್ನಲ್ಲಿ ಸತತ ಐದು ಎಸೆತಗಳಲ್ಲಿ ಐದು ವಿಕೆಟ್ ಕಬಳಿಸಿ ವಿಶ್ವದ ಗಮನ ಸೆಳೆದಿದ್ದ ಬೌಲರ್ಗೆ ಮಣೆ ಹಾಕಿದೆ.