Tirupati Kannada flag Row: ತಿರುಪತಿಯಲ್ಲಿ ಕನ್ನಡಿಗ - ಕನ್ನಡ ಬಾವುಟಕ್ಕೆ ಆಕ್ಷೇಪ; ಮಂತ್ರಾಲಯದಲ್ಲೂ ಮಾಡಬೇಕು ಎಂದ ತೆಲುಗು ಜನ: ಕನ್ನಡಿಗರು ಗರಂ!.Tirupati Kannada flag Row: Objections Kannadigas Flags; Telugu Users Call Similar Action Mantralayam Sparking Outrage. ಆಂಧ್ರಪ್ರದೇಶದ ತಿರುಪತಿ ತಿರುಮಲ ದೇವಸ್ಥಾನಕ್ಕೆ ಹೋಗುವ ವಾಹನಗಳಲ್ಲಿರುವ ಕನ್ನಡದ ಬಾವುಟ ಚಿತ್ರ ಹಾಗೂ ಬಾವುಟವನ್ನು ತೆಗೆಯುವಂತೆ ಹೇಳಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕಳೆದ ಎರಡು ವರ್ಷಗಳಿಂದಲೂ ಈ ವಿಷಯವು ಗಂಭೀರವಾದ ಚರ್ಚೆಗೆ ಕಾರಣವಾಗಿದೆ. ತಿರುಪತಿ/ತಿರುಮಲದ ಪ್ರವೇಶದಲ್ಲಿ ಗಾಡಿಗಳ ಮೇಲೆ ಹಳದಿ - ಕೆಂಪು ಏನೇ ಇದ್ದರೂ ಅದನ್ನ ತೆಗೆಸಲಾಗುತ್ತದೆ ಅಂತ ಹಲವು ಆರೋಪಗಳು ಬರುತ್ತಿವೆ.