ಕಮಲನಗರ: ವಿಶ್ವಗುರು ಬಸವಣ್ಣನವರ ಕರ್ಮಭೂಮಿ, ಬಸವಾದಿ ಶರಣರು ನಡೆದಾಡಿದ ಪುಣ್ಯಕ್ಷೇತ್ರ ಬಸವಕಲ್ಯಾಣದಲ್ಲಿ ನ.28 ಮತ್ತು 29ರಂದು 47ನೇ ಶರಣ ಕಮ್ಮಟ ಮತ್ತು ಅನುಭವ ಮಂಟಪ ಉತ್ಸವ ನಡೆಯಲಿದ್ದು, ಬಸವಾ. ಕಾಯಕ, ದಾಸೋಹ, ಮಾನವೀಯತೆ, ವರ್ಣರಹಿತ, ಧರ್ಮಸಹಿತ ಸಮಾಜ ನಿಮಾರ್ಣದ ಉತ್ಸವ ಇದಾಗಿದೆ ಎಂದರು.ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ನ ಅಧ್ಯಕ್ಷರಾದ ಮೇಲೆ ಶರಣ ಕಮ್ಮಟ ಮತ್ತು ಅನುಭವ ಮಂಟಪ ಉತ್ಸವಕ್ಕೆ ಹೊಸ ಮೆರಗು ಬಂದಿದೆ. ಪ್ರತಿವರ್ಷ ಎರಡು ದಿವಸ ಅರ್ಥಪೂರ್ಣ ಸಮಾರಂಭ ಆಯೋಜಿಸುವ ಮೂಲಕ ಬಸವಾದಿ ಶರಣರನ್ನು ಸ್ಮರಣೆ ಮಾಡುತ್ತಿರುವುದು ಮಾದರಿ ಎನಿಸಿದೆ ಎಂದು ತಿಳಿಸಿದರು.