ಶಿಮ್ಲಾ: ಇತ್ತೀಚಿನ ದಿನಗಳಲ್ಲಿ ಸಾಹಸ ಕ್ರೀಡೆಗಳ ಕ್ರೇಜ್ ಹೆಚ್ಚಾಗುತ್ತಿದೆ. ಅದರಲ್ಲೂ ಹಿಮಾಚಲ ಪ್ರದೇಶದಲ್ಲಿ, ಹಕ್ಕಿಗಳಂತೆ ಹಾರುವ ಪ್ಯಾರಾಗ್ಲೈಡಿಂಗ್ ಮಾಡುವ ಉತ್ಸಾಹಿ ಯುವ ಸಮುದಾಯಕ್ಕೆ ಜನರ ಬರ. ಆದರೆ, ಈ ಪ್ಯಾರಾಗ್ಲೈಡಿಂಗ್ ಹುಚ್ಚು ಒಬ್ಬ ಯುವಕನ ಪ್ರಾಣವನ್ನೇ ಬಲಿ ಪಡೆದಿದೆ. ಜಗತ್ಪ್ರಸಿದ್ಧ ಪ್ಯಾರಾಗ್ಲೈಡಿಂಗ್ ತಾಣವಾದ ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ 'ಬೀರ್-ಬಿಲ್ಲಿಂಗ್' ಬೆಟ್ಟಗಳಲ್ಲಿ ಭೀಕರ ದುರಂತವೊಂದು ನಡೆದಿದ್ದು, ಪ್ಯಾರಾಗ್ಲೈಡಿಂಗ್ ಮಾಡುತ್ತಿದ್ದಾಗ ಆಕಾಶದಿಂದ ಕೆಳಗೆ ಬಿದ್ದು ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾನೆ.ಮೃತ ದುರ್ದೈವಿಯನ್ನು ಗ್ರೇಟರ್ ನೋಯ್ಡಾದ ನಿವಾಸಿ ಶುಭಂ ಡೋಬ್ಲಿಯಾಲ್ ಎಂದು ಗುರುತಿಸಲಾಗಿದೆ.