Micro cutting skills : ಸಾಮಾಜಿಕ ಜಾಲತಾಣಗಳಲ್ಲಿ ನಿತ್ಯವೂ ನೂರಾರು ವಿಡಿಯೋಗಳು ವೈರಲ್ ಆಗುತ್ತವೆ. ಆದರೆ, ಕೆಲವೊಂದು ವಿಡಿಯೋ ನಂಬಲಸಾಧ್ಯ ಎನಿಸುವಷ್ಟು ವಿಸ್ಮಯ ಮೂಡಿಸುತ್ತದೆ. ಅಂಥದ್ದೇ ವಿಡಿ. ಅಂಥದ್ದೇ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.ಅಡುಗೆ ಕೇವಲ ರುಚಿಯಾದ ಆಹಾರ ತಯಾರಿಸುವುದಷ್ಟೇ ಅಲ್ಲ, ಬದಲಿಗೆ ಪದಾರ್ಥಗಳನ್ನು ಅತ್ಯಂತ ಸೂಕ್ಷ್ಮವಾಗಿ ಮತ್ತು ತಾಳ್ಮೆಯಿಂದ ನಿರ್ವಹಿಸುವ ಕಲೆಯೂ ಹೌದು ಎಂಬುದನ್ನು ರಾಜೇಂದ್ರ ಮಿಶ್ರಾ ಎಂಬ ಯುವಕ ಸಾಬೀತುಪಡಿಸಿದ್ದಾರೆ. ಇವರ ಈ ಅಸಾಧಾರಣ ನೈಪುಣ್ಯವು ಈಗ ಇಂಟರ್ನೆಟ್ ಲೋಕದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.ರಾಜೇಂದ್ರ ಮಿಶ್ರಾ ಅವರು ಕೇವಲ ಒಂದು ಉಪ್ಪಿನ ಕಣವನ್ನು ಎಂಟು ತುಂಡುಗಳಾಗಿ ಕತ್ತರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ.