Swachh Survekshan: ದೇಶದ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಈ ಬಾರಿ ಭಾರಿ ಬದಲಾವಣೆಯೇ ಕಂಡುಬಂದಿದ್ದು, ಸತತ ಎಂಟು ವರ್ಷಗಳಿಂದ ದೇಶದ ಅತ್ಯಂತ ಸ್ವಚ್ಛ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಮಧ್ಯಪ. ಇಂದೋರ್ನ ಹಿಂದಿಕ್ಕಿ, ನವಿ ಮುಂಬೈ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿದೆ. ನವಿ ಮುಂಬೈ ದೇಶದ ನಂಬರ್ ಒನ್ ಸ್ವಚ್ಛ ನಗರವಾಗಿ ಹೊರಹೊಮ್ಮಿದ್ದು, ಸೂರತ್ ಮತ್ತು ವಿಜಯವಾಡ ನಂತರದಲ್ಲಿ ಎರಡು ಹಾಗೂ ಮೂರನೇ ಸ್ಥಾನ ಪಡೆದಿವೆ. ಕೇಂದ್ರ ಸರ್ಕಾರದ ಸ್ವಚ್ಛ ಸರ್ವೇಕ್ಷಣ್ 2025-26ರ ವರದಿಯಲ್ಲಿ, ಕಳೆದ ಎಂಟು ವರ್ಷಗಳಿಂದ ಸತತವಾಗಿ ಅಗ್ರಸ್ಥಾನವನ್ನು ಅಲಂಕರಿಸುತ್ತಿದ್ದ ಇಂದೋರ್ ಈ ಬಾರಿ ಮೊದಲ ಮೂರು ಸ್ಥಾನದಿಂದ ಕೆಳಗಿಳಿದಿರುವುದು ಕೆಲವರಲ್ಲಿ ತೀರ ಆಶ್ಚರ್ಯ ಮೂಡಿಸಿದೆ.