Karnataka Weather Forecast: ಕರ್ನಾಟಕದಲ್ಲಿ ನವೆಂಬರ್ 12 ಮತ್ತು 13ರಂದು ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಒಣ ಹವಾಮಾನ ಮುಂದುವರಿಯುವ ಸಾಧ್ಯತೆ ಇದೆ. ಭಾರೀ ಮಳೆಯ ಎಚ್ಚರಿಕೆ ಯಾವ ಪ್ರದೇಶಕ್ಕೂ ಇಲ್ಲವಾಗಿದ್ದು, ಒಣ ಹವೆ ಹಾಗೂ ಚಳಿಯ ಮುನ್ಸೂಚನೆ ಇದೆ. ಧಾರವಾಡದಲ್ಲಿ ರಾಜ್ಯದ ಕನಿಷ್ಠ 12.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಬೆಂಗಳೂರು, ನವೆಂಬರ್ 12: ಕರ್ನಾಟಕದಲ್ಲಿ ನವೆಂಬರ್ 12 ಮತ್ತು 13ರಂದು ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಒಣ ಹವಾಮಾನ ಮುಂದುವರಿಯುವ ಸಾಧ್ಯತೆ ಇದೆ. ಕರಾವಳಿ ಕರ್ನಾಟಕ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಎಲ್ಲ ಜಿಲ್ಲೆಗಳಲ್ಲೂ ಒಣ ಹವಾಮಾನವೇ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಲ್ಲಿ ತಿಳಿಸಲಾಗಿದೆ.