ಬಾಕ್ಸ್ಆಫೀಸ್ನಲ್ಲಿ ಭರ್ಜರಿ ಸುನಾಮಿ ಎಬ್ಬಿಸಿರುವ ‘ರಾಮಾಯಣ’ ಸಿನಿಮಾ ಮೊದಲ ವಾರದಲ್ಲೇ ಭಾರತದಲ್ಲಿ 511.10 ಕೋಟಿ ನೆಟ್ ಕಲೆಕ್ಷನ್ ಮಾಡಿದೆ. ವಿಶ್ವಾದ್ಯಂತ ಒಟ್ಟು 934.55 ಕೋಟಿ ರೂಪಾಯಿ ಬಾಚಿಕೊಂಡಿರುವ ಈ ಚಿತ್ರ, ಬಿಡುಗಡೆಯಾದ ಕೇವಲ ಎಂಟನೇ ದಿನಕ್ಕೆ ಸಾವಿರ ಕೋಟಿ ಕ್ಲಬ್ ಸೇರುವುದು ಪಕ್ಕಾ ಆಗಿದೆ. ಮೊದಲ 7 ದಿನಗಳಲ್ಲಿ ಭಾರತದಲ್ಲಿಯೇ ಈ ಚಿತ್ರ ಬರೋಬ್ಬರಿ 511.10 ಕೋಟಿ ನೆಟ್ ಕಲೆಕ್ಷನ್ ಮಾಡುವ ಮೂಲಕ 500 ಕೋಟಿ ಕ್ಲಬ್ ಅನ್ನು ಸಲೀಸಾಗಿ ದಾಟಿದೆ. ಇದೇ ಅವಧಿಯಲ್ಲಿ ಭಾರತದ ಒಟ್ಟು ಗ್ರಾಸ್ ಕಲೆಕ್ಷನ್ 611.05 ಕೋಟಿಗೆ ತಲುಪಿದ್ದು, ಬಾಕ್ಸ್ಆಫೀಸ್ ಪಂಡಿತರ ಲೆಕ್ಕಾಚಾರಗಳನ್ನೆಲ್ಲಾ ತಲೆಕೆಳಗಾಗಿಸಿದೆ.