ಥೈರಾಯ್ಡ್ ಸಮಸ್ಯೆ ಇರುವವರು ಚಳಿಗಾಲದಲ್ಲಿ ಆಹಾರ ಪದ್ಧತಿಯ ಬಗ್ಗೆ ವಿಶೇಷ ಗಮನಹರಿಸಬೇಕು. ಅಯೋಡಿನ್, ಪ್ರೋಟೀನ್ ಮತ್ತು ಸೆಲೆನಿಯಂ ಸಮೃದ್ಧ ಆಹಾರಗಳನ್ನು ಮಿತವಾಗಿ ಸೇವಿಸುವುದು ಉತ್ತಮ. ಎಲೆಕೋಸು, ಹೂಕೋಸು ಮತ್ತು ಸೋಯಾ ಉತ್ಪನ್ನಗಳನ್ನು ಸೇವಿಸುವಾಗ ಕೆಲವು ಮುನ್ನೆಚ್ಚರಿಕೆ ಅಗತ್ಯ. ಥೈರಾಯ್ಡ್ ಮಾತ್ರೆ ತೆಗೆದುಕೊಳ್ಳುವವರು ಆಹಾರದ ಸಮಯ ಮತ್ತು ಕ್ಯಾಲ್ಸಿಯಂ, ಕಬ್ಬಿಣದ ಪೂರಕಗಳ ನಡುವಿನ ಅಂತರದ ಬಗ್ಗೆಯೂ ಗಮನಹರಿಸಬೇಕು. ಇತ್ತೀಚಿನ ದಿನಗಳಲ್ಲಿ ಥೈರಾಯ್ಡ್ ಸಮಸ್ಯೆ ಹಲವರಲ್ಲಿ ಕಂಡುಬರುತ್ತಿದೆ. ವಿಶೇಷವಾಗಿ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಥೈರಾಯ್ಡ್ ಹಾರ್ಮೋನ್ಗಳ ಅಸಮತೋಲನದಿಂದ ತೂಕ ಹೆಚ್ಚಾಗುವುದು ಅಥವಾ ಕಡಿಮೆಯಾಗುವುದು, ಸುಸ್ತು, ಕೂದಲು ಉದುರುವುದು ಸೇರಿದಂತೆ ಹಲವು ತೊಂದರೆಗಳು ಕಾಣಿಸಿಕೊಳ್ಳಬಹುದು.