ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಕಬ್ಬು ಬೆಳೆಗಾರರು ಟನ್ಗೆ 4000 ರಿಂದ 4200 ರೂ ಬೆಲೆಗಾಗಿ ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಬೆಳಗಾವಿ ಹೋರಾಟದ ಬೆನ್ನಲ್ಲೇ 3600 ರೂ ಬೆಲೆಯನ್ನು ತಿರಸ್ಕರಿಸಿದ ರೈತರು, ತಮ್ಮ ಬೆಳೆಗಳಿಗೆ ನ್ಯಾಯಯುತ ದರ ನೀಡುವಂತೆ ಒತ್ತಾಯಿಸಿದ್ದಾರೆ. ಕೂಡಲೇ ಸಮಸ್ಯೆ ಇತ್ಯರ್ಥಪಡಿಸುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಬಾಗಲಕೋಟೆ, ನವೆಂಬರ್ 11: ಕಳೆದ ಒಂದುವರೆ ತಿಂಗಳಿಂದ ಕಬ್ಬಿಗೆ ಯೋಗ್ಯ ಬೆಲೆಗಾಗಿ ಬೆಳಗಾವಿಯಲ್ಲಿ ರೈತರು ಬೃಹತ್ ಹೋರಾಟ ನಡೆಸಿದ್ದರು. ಆ ಹೋರಾಟಕ್ಕೆ ಬಾಗಲಕೋಟೆ ರೈತರು ಕೂಡ ಕೈಜೋಡಿಸಿದ್ದರು. ಆದರೆ ಬೆಳಗಾವಿ ಹೋರಾಟ ಮುಕ್ತಾಯದ ಬೆನ್ನಲ್ಲೇ, ಮುಧೋಳ ಭಾಗದ ರೈತರು ಪ್ರತಿಭಟನೆ ತೀವ್ರಗೊಳಿಸಿದ್ದಾರೆ.