ಯುವಕರು ಧರ್ಮದ ರಕ್ಷಣೆಗೆ ಮುಂದಾಗಲಿ| ವಿ.ಪ ಮಾಜಿ ಸದಸ್ಯ ಕವಟಗಿಮಠ ಕರೆ | ಚಿಂಚಣಿಯಲ್ಲಿ ಪಲ್ಲಕ್ಕಿ ಉತ್ಸವ ಕಾರ್ಯಕ್ರಮವಿಜಯವಾಣಿ ಸುದ್ದಿಜಾಲ ಚಿಕ್ಕೋಡಿಧರ್ಮೊ ರಕ್ಷಿತ ರಕ್ಷಿತಾಃ ಎಂಬ ಮಾತಿನಂತೆ. ಆದ್ದರಿಂದ ಪ್ರತಿಯೊಬ್ಬರು ಧರ್ಮದ ರಕ್ಷಣೆಗೆ ಮುಂದಾಗಬೇಕಿದೆ ಎಂದು ವಿಧಾನ ಪರಿಷತ್ತಿನ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಅಭಿಪ್ರಾಯಪಟ್ಟರು.ತಾಲೂಕಿನ ಚಿಂಚಣಿ ಗ್ರಾಮದ ಅಲ್ಲಮಪ್ರಭು ಸಿದ್ಧ ಸಂಸ್ಥಾನ ಮಠದಲ್ಲಿ ಈಚೆಗೆ ದೀಪಾವಳಿ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಪಲ್ಲಕ್ಕಿ ಉತ್ಸವ ಮತ್ತು ಶ್ರೀಮಠದ ಹಿಂದಿನ ಅಲ್ಲಮಪ್ರಭು ಸ್ವಾಮೀಜಿ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಬಸವಣ್ಣನವರು ೧೨ನೇ ಶತಮಾನದಲ್ಲಿ ಸಮ ಸಮಾಜ ಕನಸು ಕಂಡವರು. ವರ್ಗ ರಹಿತ, ವರ್ಣ ರಹಿತ ಎಲ್ಲ ಜಾತಿಗಳನ್ನು ಮೀರಿ ಬೆಳೆದವರು ಬೆಳೆದವರು.