AI Skill Development Center: ವಿದ್ಯಾರ್ಥಿಗಳಿಗೆ AI ತರಬೇತಿ ನೀಡಲು ಮಾಸ್ಟರ್ ಪ್ಲಾನ್: ತೋಟದಪ್ಪ ಸಂಸ್ಥೆಗೆ CA ಸೈಟ್ ಮಂಜೂರು: ಎಂಬಿ ಪಾಟೀಲ್, Large Industries Minister MB Patil promised CA land for Gubbi Thotadappa Trust's AI skill center. ಬೆಂಗಳೂರು: ಗುಬ್ಬಿ ತೋಟದಪ್ಪ ಧರ್ಮಸಂಸ್ಥೆ ವತಿಯಿಂದ ವಿದ್ಯಾರ್ಥಿಗಳಿಗಾಗಿ ಕೌಶಲಾಭಿವೃದ್ಧಿ, ಕೃತಕ ಬುದ್ಧಿಮತ್ತೆ (AI), ಮಾಹಿತಿ ತಂತ್ರಜ್ಞಾನ ಮತ್ತು ತಾಂತ್ರಿಕ ಹಾಗೂ ಉದ್ಯೋಗಾಧಾರಿತ ಕೌಶಲಗಳ ತರಬೇತಿಗಾಗಿ ಒಂದು ಕೇಂದ್ರ ಸ್ಥಾಪಿಸುವ ಉದ್ದೇಶವಿದೆ. ಅದಕ್ಕಾಗಿ ಸಂಸ್ಥೆಗೆ ನಾಗರಿಕ ಸೌಲಭ್ಯದ (ಸಿಎ) ನಿವೇಶನ ಮಂಜೂರು ಮಾಡಲಾಗುವುದು ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ತಿಳಿಸಿದರು.