Couple dangerous bike stunt: ಕ್ರೇಜಿಸ್ಟಾರ್ ರವಿಚಂದ್ರನ್ ಅವರ ‘ಪ್ರೇಮಲೋಕ’ ಸಿನಿಮಾದ ಹಿಟ್ ಹಾಡಿನಲ್ಲಿ ಬೈಕ್ ಮೇಲೆ ಹೀರೋಯಿನ್ ಕೂರಿಸಿಕೊಂಡು ಹೋಗುವ ಸೀನ್ ನೆನಪಿದೆಯಾ? ಥೇಟ್ ಅದೇ ಶೈಲಿಯಲ್. ಥೇಟ್ ಅದೇ ಶೈಲಿಯಲ್ಲಿ, ‘ಏ ಗಂಗೂ, ಈ ಬೈಕೂ ಕಲಿಸಿಕೊಡೋ ನಂಗೂ’ ಎನ್ನುವಂತೆ ಯುವತಿಯೊಬ್ಬಳು ಬೈಕ್ನ ಪೆಟ್ರೋಲ್ ಟ್ಯಾಂಕ್ ಮೇಲೆ ಯುವಕನನ್ನು ತಬ್ಬಿಕೊಂಡು ಕುಳಿತು ಹುಚ್ಚಾಟ ಮೆರೆದಿದ್ದಾರೆ.ರಸ್ತೆಯಲ್ಲಿ ಸಾಗುತ್ತಿದ್ದ ಇತರ ವಾಹನ ಸವಾರರು ಈ ಅಪಾಯಕಾರಿ ಹಾಗೂ ನಿಯಮಬಾಹಿರ ಸವಾರಿಯನ್ನು ತಮ್ಮ ಮೊಬೈಲ್ನಲ್ಲಿ ವೀಡಿಯೋ ಮಾಡಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಸದ್ಯ ಈ ವೀಡಿಯೋ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.ಎಲ್ಲಿ ನಡೆದಿದ್ದು ಈ ಘಟನೆ?