ತಾಯಿ ಪ್ರೀತಿ, ಕಾಳಜಿಯನ್ನು ಬೇರೆ ಯಾರ ಪ್ರೀತಿಗೂ ಕೂಡ ಹೋಲಿಕೆ ಮಾಡೋಕೆ ಆಗಲ್ಲ. ಇದಕ್ಕೆ ಸಾಕ್ಷಿಯಾಗಿದೆ ಈ ದೃಶ್ಯ. ಮರಿಯಾನೆ ತನ್ನ ಕಂದಮ್ಮನನ್ನು ತೋಳಿನಲ್ಲಿ ಅಪ್ಪಿಕೊಂಡು ಮಲಗಿಸಿಕೊಂಡಿದೆ. ಈ ಕ್ಯೂಟ್ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಗಮನ ಸೆಳೆದಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ. ಮೂಕ ಪ್ರಾಣಿಗಳು ತಮ್ಮ ಕಂದಮ್ಮಗಳಿಗೆ ಪ್ರೀತಿ, ಕಾಳಜಿ ತೋರುತ್ತವೆ. ಇಂತಹ ಕ್ಯೂಟ್ ದೃಶ್ಯಗಳು ನಿಮ್ಮ ಕಣ್ಣಿಗೆ ಬಿದ್ದಿರಬಹುದು. ಆದರೆ ಇದೀಗ ತಾಯಾನೆಯ (mother elephants) ಅಪ್ಪುಗೆಯಲ್ಲಿ ಮರಿಯಾನೆ ಸುಖ ನಿದ್ರೆಗೆ ಜಾರಿದೆ. ತಾಯಿ ಪ್ರೀತಿ ಸಾರುವ ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.