ಈಗಂತೂ ಡೈಲಿ ವ್ಲಾಗ್ಸ್ ಹೆಚ್ಚು ಜನಪ್ರಿಯತೆಯನ್ನು ಗಳಿಸುತ್ತಿವೆ. ಹೌದು ಟ್ರಾವೆಲ್, ಎಜುಕೇಷನಲ್ ಸೇರಿದಂತೆ ಬೇರೆಲ್ಲಾ ವಿಡಿಯೋಗಳಿಗಿಂತ ಯುಟ್ಯೂಬ್ನಲ್ಲಿ ಡೈಲಿ ವ್ಲಾಗ್ಗಳ ವೀವ್ಸ್ ತುಂಬಾನೇ ಹೆಚ್ಚಿದೆ. ಜೆನ್ ಝೀಗಳಂತೂ ಯುಟ್ಯೂಬರ್ಸ್ ಹಾಕುವ ಡೈಲಿ ವ್ಲಾಗ್ಗಳನ್ನೇ ಏಕೆ ಹೆಚ್ಚು ಹೆಚ್ಚು ವೀಕ್ಷಿಸುತ್ತಾರೆ, ಜನರಿಗೆ ಅಪರಿಚಿತರ ದೈನಂದಿನ ದಿನಚರಿ ವಿಡಿಯೋಗಳನ್ನು ನೋಡುವುದೆಂದರೆ ಯಾಕಿಷ್ಟು ಕ್ರೇಜ್ ಎಂಬುದರ ಪೂರ್ಣ ವಿವರ ಇಲ್ಲಿದೆ. ಸಾಮಾಜಿಕ ಮಾಧ್ಯಮದಲ್ಲಿ ದಿನಕ್ಕೆ ಸಾವಿರಾರು ವಿಡಿಯೋಗಳು ಅಪ್ಲೋಡ್ ಆಗುತ್ತಿರುತ್ತವೆ. ಯುಟ್ಯೂಬ್ನಲ್ಲಿ ವ್ಲಾಗರ್ಸ್ಗಳು ತರಹೇವಾರಿ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ. ಅದರಲ್ಲಿ ಡೈಲಿ ವ್ಲಾಗ್ಗಳು (Daily Vlogs) ಅತಿ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಳ್ಳುತ್ತವೆ.