ಒಂಬತ್ತನೇ ತರಗತಿಯ ಅರ್ಧವಾರ್ಷಿಕ ಪರೀಕ್ಷೆಯಲ್ಲಿ ಮಾರ್ಕ್ಸ್ ಗುರಿ ಮುಟ್ಟಿದ ಮಗನಿಗೆ ಅಪ್ಪ ಬೆಲೆ ಬಾಳುವ ಕಾರೊಂದನ್ನು ಗಿಫ್ಟ್ ಆಗಿ ನೀಡಿದ್ದಾರೆ. ಪಶ್ಚಿಮ ಬಂಗಾಳದ ಪೂರಬ್ ಬರ್ಧಮಾನ್ ಜಿಲ್ಲೆಯ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ. 15 ವರ್ಷದ ಬಾಲಕ 1.62 ಕೋಟಿ ರೂ ಬೆಲೆಯ ಬಿಎಂಡಬ್ಲ್ಯು ಎಂ4 ಕಾಂಪಿಟೀಶನ್ ಕಾರನ್ನು ಉಡುಗೊರೆಯಾಗಿ ಪಡೆದಿದ್ದಾರೆ. ಆ ಊರಿನ ಸುತ್ತಮುತ್ತಲೂ ಈ ಕಾರು ಟಾಕ್ ಆಗುತ್ತಿದೆ. ಕೋಲ್ಕತಾ, ನವೆಂಬರ್ 11: ಮಕ್ಕಳು ಪರೀಕ್ಷೆಯಲ್ಲಿ ಪಾಸಾದಾಗ ಪೋಷಕರು ಚಾಕೊಲೇಟನ್ನೋ, ಸೈಕಲ್ ಅನ್ನೋ, ಬೈಕ್ ಅನ್ನೋ, ಬಟ್ಟೆಯನ್ನೋ ಇತ್ಯಾದಿ ಗಿಫ್ಟ್ಗಳನ್ನು ಕೊಡುವುದುಂಟು. ಅದೂ ಎಸ್ಸೆಸ್ಸೆಲ್ಸಿ, ಪಿಯುಸಿಯಂತಹ ಪರೀಕ್ಷೆಗಳಲ್ಲಿ ಪಾಸಾದ ಮಕ್ಕಳಿಗೆ ವಿಶೇಷ ಗಿಫ್ಟ್ ಸಿಗಬಹುದು.