ಸೋಶಿಯಲ್ ಮೀಡಿಯಾದಿಂದ ಎಷ್ಟು ಒಳ್ಳೆಯದೆಯೋ ಅಷ್ಟೇ ಕೆಟ್ಟದು ಇದೆ. ಇದಕ್ಕೆ ಉದಾಹರಣೆಯಂತಿದೆ ಈ ಘಟನೆ. ಮಹಿಳೆಯೊಬ್ಬರಿಗೆ ಡೆಲಿವರಿ ಬಾಯ್ ವಾಟ್ಸಪ್ ನಲ್ಲಿ ವೈಯಕ್ತಿಕ ಮೆಸೇಜ್ ಕಳುಹಿಸಿದ್ದಾನೆ. ಆರ್ಡರ್ ತಲುಪಿಸಲು ಬಂದ ಡೆಲಿವರಿ ಬಾಯ್ನ ನಡೆ ಬಗ್ಗೆ ಈ ಮಹಿಳೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಪೋಸ್ಟ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟು ಹಾಕಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ. ಇತ್ತೀಚೆಗಿನ ದಿನಗಳಲ್ಲಿ ಆನ್ಲೈನ್ ನಲ್ಲಿ ಆರ್ಡರ್ ಮಾಡುವವರೇ ಹೆಚ್ಚು. ಡೆಲಿವರಿ ಬಾಯ್ಸ್ (delivery boy) ಗ್ರಾಹಕರಿಗೆ ಆರ್ಡರ್ ತಲುಪಿಸುವಾಗ ಅಥವಾ ಆರ್ಡರ್ ಸಂಬಂಧಿತ ಮಾಹಿತಿ ನೀಡಲು ಕರೆ ಮಾಡುವುದು ಸಹಜ. ಆದರೆ ಇಲ್ಲೊಬ್ಬ ಮಹಿಳೆಯ ಫೋನ್ ನಂಬರ್ ಬಳಸಿ ಅನುಚಿತವಾಗಿ ವರ್ತಿಸಿದ್ದಾನೆ.