ಪ್ರಸ್ತುತ ‘ಬಿಗ್ ಬಾಸ್ ತೆಲುಗು ಸೀಸನ್ 10' ರಿಯಾಲಿಟಿ ಶೋನಲ್ಲಿ ಹತ್ತನೇ ವಾರದ ಫ್ಯಾಮಿಲಿ ವೀಕ್ ಸಂಭ್ರಮ ನಡೆಯುತ್ತಿದ್ದು, ಸ್ಪರ್ಧಿಗಳ ಕುಟುಂಬಸ್ಥರು ಮತ್ತು ಆಪ್ತರು ಹೌಸ್ ಒಳಗೆ ಬಂದು ಸಂಭ್ರಮಿಸುತ್ತಿದ್ದಾರೆ. ಅದರ ಒಂದು ಭಾಗವಾಗಿ ನಟ ಶಿವಕುಮಾರ್ ಅವರ ಗೆಳತಿ ಹಾಗೂ ನಟಿ ಪ್ರಿಯಾಂಕಾ ಜೈಸ್ವಾಲ್ ಹೌಸ್ ಒಳಗೆ ಪ್ರವೇಶಿಸಿದ್ದಾರೆ. ‘ಬಿಗ್ಬಾಸ್’ ಮನೆಯಲ್ಲಿ ಸ್ಪರ್ಧಿಗಳ ನಡುವೆ ರೊಮ್ಯಾನ್ಸ್, ಪ್ರೀತಿ-ಪ್ರೇಮ ನಡೆಯುವುದು ಬಹಳ ಸಾಮಾನ್ಯ. ಬಿಗ್ಬಾಸ್ ಮನೆಯಲ್ಲಿ ಹುಟ್ಟಿದ ಪ್ರೀತಿ, ಬಿಗ್ಬಾಸ್ ಹೊರಗೂ ಚಾಲ್ತಿಯಲ್ಲಿರುತ್ತದೆ. ಕೆಲವೊಮ್ಮೆ ಬಿಗ್ಬಾಸ್ ಮನೆಯಲ್ಲಿ ಹುಟ್ಟಿದ ಪ್ರೀತಿ ಅಲ್ಲೇ ಅಂತ್ಯವೂ ಆಗುತ್ತದೆ. ಆದರೆ ಇದೇ ಮೊದಲ ಬಾರಿಗೆ ಬಿಗ್ಬಾಸ್ ಮನೆಯಲ್ಲಿ ಮದುವೆ ನಿಶ್ಚಿತಾರ್ಥ ನಡೆದಿದೆ.