ಲಖನೌ: ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ಚುನಾವಣೆಗೂ ಮುನ್ನವೇ ಬಿಜೆಪಿಯ ಧರ್ಮದ ಅಸ್ತ್ರಕ್ಕೆ ಸೆಡ್ಡು ಹೊಡೆದಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಮತ್ತು ಮಾಜಿ ಸಿಎಂ ಅಖಿಲೇಶ್ ಯಾದವ್, ಉತ್ತ. 12ರಂದು ರಾಮಮಂದಿರಕ್ಕೆ ಭೇಟಿ ನೀಡುವ ಘೋಷಣೆ ಮಾಡಿದ ಕೆಲ ದಿನಗಳ ಬಳಿಕ ಮಂಗಳವಾರ(ನ. 10) ಹೇಳಿಕೆ ಬಿಡುಗಡೆ ಮಾಡಿರುವ ಅಖಿಲೇಶ್ ಯಾದವ್, ನಮ್ಮ ಸರ್ಕಾರ ಬಂದರೆ ಅಯೋಧ್ಯೆಯಲ್ಲಿ ವಿಶ್ವ ದರ್ಜೆಯ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುತ್ತದೆ. ರಾಮ ಮಂದಿರಕ್ಕೆ ಪಾರದರ್ಶಕ ನಿರ್ವಹಣಾ ವ್ಯವಸ್ಥೆಯನ್ನು ಪರಿಚಯಿಸುತ್ತದೆ. ಮತ್ತು ಯಾತ್ರಿಕರ ಸಂಖ್ಯೆ ಕಡಿಮೆಯಾದ ಕಾರಣ ಸ್ಥಳೀಯ ಆರ್ಥಿಕತೆಗೆ ಪುನರುಜ್ಜೀವನ ನೀಡಲು ಕೆಲಸ ಮಾಡುತ್ತದೆ ಎಂದು ಹೇಳಿದ್ದಾರೆ.