ವಿಜಯಪುರ: ‘ಸಂವಿಧಾನದಲ್ಲಿ ಮನುಸ್ಮತಿಯ ಆಶಯಗಳಿವೆ’ ಎಂದಿರುವ ಕನ್ಹೇರಿಯ ಕಾಡಸಿದ್ಧೇಶ್ವರ ಸ್ವಾಮೀಜಿ ಊರ್ಫ್ ಬಾಪುಗೌಡ ಮೇಟಿ ವಿರುದ್ಧ ಕ್ರಮ ಕೈಗೊಳ್ಳುವಂತೆ ದಲಿತ, ಹಿಂದುಳಿದ ಸಮುದಾಯದ ಮುಖಂಡರು ಒ. ಈಗಾಗಲೇ ಅವರ ಮೇಲೆ ದೂರು ದಾಖಲಿಸಲು ಸಿದ್ಧತೆ ನಡೆದಿದೆ. 26 ರಂದು ಬೃಹತ್ ಹೋರಾಟ ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಸಮಾಲೋಚನೆ ನಡೆಸಲಾಗುತ್ತಿದೆ. ಮಾತ್ರವಲ್ಲ, ಮಹಾರಾಷ್ಟ್ರದಲ್ಲಿ ಅತ್ಯಂತ ಬಲಿಷ್ಠವಾಗಿರುವ ದಲಿತ ಸಂಘಟನೆಗಳಿಂದ ಕನ್ಹೇರಿ ಸ್ವಾಮೀಜಿ ತೀವ್ರ ಪ್ರತಿರೋಧ ಎದುರಿಸಬೇಕಾಗುತ್ತದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಎಚ್ಚರಿಸಿದರು.ಮಾಜಿ ಶಾಸಕ ರಾಜು ಆಲಗೂರ ಮಾತನಾಡುತ್ತಾ, ಸಂವಿಧಾನದಲ್ಲಿ ಮನುಸ್ಮತಿಯ ಆಶಯಗಳಿಲ್ಲವೆಂಬ ಕಾರಣಕ್ಕಾಗಿಯೇ ಈ ಹಿಂದೆ ಆರ್ಎಸ್ಎಸ್ ಮುಖವಾಣಿ ಆರ್ಗನೈಸರ್ನಂತ ಪತ್ರಿಗಳು ತೀವ್ರವಾಗಿ ಖಂಡಿಸಿದ್ದವು. ಅಲ್ಲದೇ, ಮನುವಾದಿಗಳು ಸಂವಿಧಾನದ ಪ್ರತಿಯನ್ನೇ ಸುಟ್ಟು ಪ್ರತಿಭಟಿಸಿದ್ದರು.