ಫ್ರಾಂಕ್ಫರ್ಟ್ನಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನಕ್ಕೆ ‘ಸ್ಕ್ವಾಕ್ 7500’ ಅಪಹರಣದ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಜೈಪುರದಲ್ಲಿ ತುರ್ತು ಇಳಿಸಲಾಗಿದೆ. ಪೈಲಟ್ ಆಕಸ್ಮಿಕವಾಗಿ ಸಂಕೇತ ಸಕ್ರಿಯಗೊಳಿಸಿದ್ದರಿಂದ ಗೊಂದಲ ಉಂಟಾಗಿದೆ... ಜರ್ಮನಿಯ ಫ್ರಾಂಕ್ಫರ್ಟ್ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನವೊಂದನ್ನು ಅಪಹರಣದ ಎಚ್ಚರಿಕೆ ಸಂದೇಶದ ಹಿನ್ನೆಲೆಯಲ್ಲಿ ಜೈಪುರ ವಿಮಾನ ನಿಲ್ದಾಣದಲ್ಲಿ ತುರ್ತಾಗಿ ಇಳಿಸಲಾಗಿದೆ. ವಿಮಾನದಿಂದ ಅಪಹರಣ ಸೂಚಿಸುವ ‘ಸ್ಕ್ವಾಕ್ 7500’ ಸಂಕೇತ ರವಾನೆಯಾಗಿದ್ದರಿಂದ ಭದ್ರತಾ ಸಂಸ್ಥೆಗಳು ತಕ್ಷಣ ಕಾರ್ಯಪ್ರವೃತ್ತವಾಗಿದ್ದವು. ಆದರೆ, ಪ್ರಾಥಮಿಕ ಮಾಹಿತಿಯ ಪ್ರಕಾರ, ಪೈಲಟ್ ಆಕಸ್ಮಿಕವಾಗಿ ಎಚ್ಚರಿಕೆಯ ಸಂಕೇತವನ್ನು ಸಕ್ರಿಯಗೊಳಿಸಿದ್ದೇ ಗೊಂದಲಕ್ಕೆ ಕಾರಣ ಎನ್ನಲಾಗಿದೆ.