ವೈಟ್ ಬೋರ್ಡ್ ಕಾರುಗಳನ್ನು ವೃದ್ಧಾಶ್ರಮಕ್ಕೆ ಬಾಡಿಗೆಗೆ ಬೇಕು ಎಂದು ಹೇಳಿ ಪಡೆದು, ಬಳಿಕ ಅವುಗಳನ್ನು ಅಡಮಾನ ಇಟ್ಟು ಲಕ್ಷಾಂತರ ರೂಪಾಯಿ ಸಾಲ ಪಡೆದು ವಂಚಿಸುತ್ತಿದ್ದ ಆರೋಪದ ಮೇಲೆ ಜೆ.ಪಿ. ನಗರದ ಸುನಿಲ್ ನಾಯಕ್ ಎಂಬಾತನನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ. ಈತನಿಂದ ಸುಮಾರು 1.20 ಕೋಟಿ ರೂ. ಮೌಲ್ಯದ 12 ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬೆಂಗಳೂರು, ನವೆಂಬರ್ 11: ಕಾರು ಮಾಲೀಕರಿಂದ ವೈಟ್ ಬೋರ್ಡ್ ಕಾರುಗಳನ್ನು ಬಾಡಿಗೆಗೆ ಪಡೆದು, ಅವುಗಳನ್ನು ವಾಪಸ್ ನೀಡದೆ ವಂಚಿಸುತ್ತಿದ್ದ ಆರೋಪದ ಮೇಲೆ ಒಬ್ಬನನ್ನು ಬೆಂಗಳೂರಿನ ಹುಳಿಮಾವು ಪೊಲೀಸರು ಬಂಧಿಸಿದ್ದಾರೆ. ನಗರ 9ನೇ ಫೇಸ್ ನಿವಾಸಿ ಸುನಿಲ್ ನಾಯಕ್ ಬಂಧಿತ ಆರೋಪಿ. ಆತನ ಬಳಿಯಿಂದ ಒಟ್ಟು 12 ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.