ಕತ್ತೆಗಳ ಜಾತ್ರೆಯಲ್ಲಿ ಶಾರುಖ್ ಖಾನ್, ಸಲ್ಮಾನ್ ಖಾನ್, ಅಮಿತಾಬ್ ಬಚ್ಚನ್! ಆದರೆ ಅತಿ ಹೆಚ್ಚು ಬೇಡಿಕೆ ಕುದುರಿದ್ದು ನಟ ಚಂಕಿ ಪಾಂಡೆಗೆ. ಅಸಲಿಗೆ ಈ ಜಾತ್ರೆಗೆ ಬರುವ ಹಲವು ಕತ್ತೆಗಳಿಗೆ ಹೀಗೆ ಬಾಲಿವುಡ್ ನಟರ ಹೆಸರಿಡಲಾಗುತ್ತದೆ. ಇಲ್ಲಿ ಕತ್ತೆಗಳ ಮಾರಾಟ ಮಾಡಲಾಗುತ್ತಿದೆ. ಈ ಸಂತೆಯಲ್ಲಿ ಈ ಬಾರಿ ಚಂಕಿ ಪಾಂಡೆ ಹೆಸರಿನ ಕತ್ತೆ ದೊಡ್ಡ ಮೊತ್ತಕ್ಕೆ ಮಾರಾಟ ಆಗಿದೆ. ಮಧ್ಯಪ್ರದೇಶದ ಚಿತ್ರಕೂಟದಲ್ಲಿ ಪ್ರತಿ ವರ್ಷ ಕತ್ತೆಗಳ ಜಾತ್ರೆ ನಡೆಯುತ್ತದೆ. ಈ ವರ್ಷವೂ ಇಂಥಹುದೇ ಕತ್ತೆಗಳ ಜಾತ್ರೆ ನಡೆದಿದೆ. ಈ ಜಾತ್ರೆಯಲ್ಲಿ ಶಾರುಖ್ ಖಾನ್, ಸಲ್ಮಾನ್ ಖಾನ್, ಅಮಿತಾಭ್ ಬಚ್ಚನ್ ಇದ್ದರು, ಆದರೆ ಅತಿ ಹೆಚ್ಚು ಬೇಡಿಕೆ ಕುದುರಿದ್ದು ನಟ ಚಂಕಿ ಪಾಂಡೆಗೆ.