ಡಾ.ರಾಜಕುಮಾರ್ ಸಂಬಂಧಿ ಮನೆಯಲ್ಲಿ ಸಂಭವಿಸಿದ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಪೊಲೀಸರು ಕೆಲ ಯುವಕರನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳ ಮಹಜರಿನಲ್ಲಿ ಯುವಕರು ಪಟಾಕಿ ಹೊಡೆದಿರುವುದಾಗಿ ಹೇಳಿಕೊಂಡರೆ, ಕುಟುಂಬಸ್ಥರು ಇದನ್ನು ಒಪ್ಪದೆ ಬೇರೆ ಏನೋ ನಡೆದಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಘಟನೆ ಡಾ.ರಾಜಕುಮಾರ್ ಸಂಬಂಧಿಕರ ಮನೆ ಮುಂದೆ ಹೈಡ್ರಾಮಾಕ್ಕೆ ಕಾರಣವಾಗಿದೆ. ಚಾಮರಾಜನಗರ, ನವೆಂಬರ್ 10: ತಮಿಳುನಾಡಿನ ಗಾಜನೂರಿನಲ್ಲಿರುವ ಡಾ.ರಾಜಕುಮಾರ್ ಅವರ ಸಂಬಂಧಿ ಮನೆಯಲ್ಲಿ ಸಂಭವಿಸಿದ ನಿಗೂಢ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅನುಮಾನ ಹಿನ್ನೆಲೆ ಕೆಲ ಯುವಕರನ್ನು ತಮಿಳುನಾಡು ಪೊಲೀಸರು ವಶಕ್ಕೆ ಪಡೆದು ಸ್ಥಳ ಮಹಜರಿಗಾಗಿ ಕರೆತಂದಿದ್ದಾರೆ. ಮೂರ್ನಾಲ್ಕು ಆಟೋ ಬಾಂಬ್ಗಳನ್ನ ಜೋಡಿಸಿ ಸ್ಫೋಟಿಸಿರುವುದಾಗಿ ಹೇಳಿದ್ದಾರೆ.