ಇರಾನ್ ಯುದ್ಧದ ಕುರಿತು ಟೀಕೆಗಳ ಬೆನ್ನಲ್ಲೇ, ಅಮೆರಿಕದ ಯುದ್ಧ ಕಾರ್ಯದರ್ಶಿ ಪೀಟ್ ಹೆಗ್ಸೆತ್, ಯುದ್ಧ ಶುರು ಮಾಡಿದ್ದು ನಾವಲ್ಲ, ಇರಾನ್ 47 ವರ್ಷಗಳ ಹಿಂದೆಯೇ ಶುರು ಮಾಡಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಕಾಂಗ್ರೆಸ್ ಅನುಮತಿಯಿಲ್ಲದೆ ಇರಾನ್, ಯೆಮೆನ್, ವೆನೆಜುವೆಲಾದಲ್ಲಿ ನಡೆಸಿದ ಮಿಲಿಟರಿ ಕಾರ್ಯಾಚರಣೆಗಳಿಗಾಗಿ ಅವರ ವಿರುದ್ಧ ದೋಷಾರೋಪಣೆ ನಿರ್ಣಯ ಮಂಡಿಸಲಾಗಿದೆ. ಇದು US ಯುದ್ಧ ಘೋಷಣೆ ಅಧಿಕಾರದ ಕುರಿತು ಸಂವಿಧಾನಾತ್ಮಕ ಚರ್ಚೆಗೆ ಕಾರಣವಾಗಿದೆ. ವಾಷಿಂಗ್ಟನ್, ನವೆಂಬರ್ 10: ಇರಾನ್ ವಿರುದ್ಧ ಅಮೆರಿಕ ನಡೆಸುತ್ತಿರುವ ಯುದ್ಧದ ವಿಚಾರವಾಗಿ ದೇಶದೊಳಗೆ ಟೀಕೆಗಳು ಹೆಚ್ಚುತ್ತಿರುವ ಬೆನ್ನಲ್ಲೇ, ಅಮೆರಿಕದ ಯುದ್ಧ ಕಾರ್ಯದರ್ಶಿ ಪೀಟ್ ಹೆಗ್ಸೆತ್ ತಮ್ಮ ಕ್ರಮಗಳನ್ನು ಸಮರ್ಥಿಸಿಕೊಂಡಿದ್ದಾರೆ.