ಬೆಂಗಳೂರು ಸೇರಿದಂತೆ ರಾಜ್ಯದ ಕೆಲವೆಡೆ ದೀಪಾವಳಿ ಪಟಾಕಿ ಅವಘಡಗಳು ಆತಂಕಕಾರಿ ಪ್ರಮಾಣದಲ್ಲಿ ಏರಿಕೆ ಕಂಡಿವೆ. 150ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಪಟಾಕಿ ಹಚ್ಚದ ಬೈಸ್ಟ್ಯಾಂಡರ್ಗಳೇ ಹೆಚ್ಚು ಗಾಯಗೊಂಡಿದ್ದಾರೆ. ರಸ್ತೆಯಲ್ಲಿ ಹೋಗುವವರು, ನೋಡುವವರು, ಪುಟ್ಟ ಮಕ್ಕಳ ಕಣ್ಣುಗಳಿಗೆ ಪಟಾಕಿ ಕಿಡಿ ತಗುಲಿ ಗಂಭೀರ ಹಾನಿಯಾಗಿದೆ. ಬೆಂಗಳೂರು, ನವೆಂಬರ್ 10: ಯಾರೋ ಮಾಡಿದ ತಪ್ಪಿಗೆ ಇನ್ಯಾರಿಗೋ ಶಿಕ್ಷೆ ಎನ್ನುವಂತಾಗಿದೆ. ಪಟಾಕಿ ಹಚ್ಚಿದವರಿಗಿಂತ ಪಟಾಕಿ ಹಚ್ಚದೇ ಇದ್ದವರಿಗೆ ಈ ಬಾರಿ ಹೆಚ್ಚು ಅಪಾಯ ಎದುರಾಗಿದೆ. ರಸ್ತೆಯಲ್ಲಿ ಹೋಗುವವರು, ನಿಂತು ನೋಡುವವರು, ಆಟವಾಡುವ ಪುಟ್ಟ ಮಕ್ಕಳು ಹೀಗೆ ಅನೇಕರ ಕಣ್ಣಿಗೆ ಪಟಾಕಿ ಕಿಡಿ ತಗುಲಿ ಆಸ್ಪತ್ರೆ ಸೇರುವಂತಾಗಿದೆ. ಬೆಳಕಿನ ಹಬ್ಬದಲ್ಲಿ ಅದೆಷ್ಟೋ ಕುಟುಂಬಗಳ ಬದುಕಿನಲ್ಲಿ ಕತ್ತಲು ಆವರಿಸಿದೆ.