ಸ್ಯಾಂಡಲ್ವುಡ್ (Sandalwood) ಚರಿತ್ರೆಯಲ್ಲಿ ಕೆಲವೊಮ್ಮೆ ಯಾವುದೇ ದೊಡ್ಡ ಸ್ಟಾರ್ಗಳಿರಲಿ, ಅಥವಾ ಅತಿ ದೊಡ್ಡ ಬಜೆಟ್ ಇರಲಿ; ಕೇವಲ ಒಳ್ಳೆಯ ಕಥೆ ಮತ್ತು ಜನರ ಪ್ರೀತಿಯಿಂದ ಮಾತ್ರ ಸಿನಿಮಾಗಳು ಇತಿಹಾಸ ಸೃಷ್ಟಿಸಬಲ್ಲವು ಎಂಬುದಕ್ಕೆ ಕಾಲಕಾಲಕ್ಕೆ ಕೆಲವು ಚಿತ್ರಗಳು ಸಾಕ್ಷಿಯಾಗುತ್ತಲೇ ಬಂದಿವೆ. ಅಂಥದ್ದೇ ಸಾಲಿಗೆ ಸೇರುವ ಎರಡು ಮೈಲಿಗಲ್ಲು ಸಿನಿಮಾಗಳಾದ 'ಮುಂಗಾರು ಮಳೆ' (2006) ಮತ್ತು 'ಪ್ರೇಮದ ಊರಲಿ' (2026) ಕುರಿತು 'ನಮ್ಮೂರು ಕರ್ನಾಟಕ' ಫೇಸ್ಬುಕ್ ಪೇಜ್ನಲ್ಲಿ ಹಂಚಿಕೊಳ್ಳಲಾದ ಪೋಸ್ಟ್ ಸದ್ಯ ವೈರಲ್ ಆಗಿದೆ. 2006 – ಮುಂಗಾರು ಮಳೆ (Mungaru Male): ಕನ್ನಡ ಚಿತ್ರರಂಗದ ಗತಿಯನ್ನೇ ಬದಲಿಸಿದ ಸಿನಿಮಾ ಮುಂಗಾರು ಮಳೆ.