Egg Dosa Recipe: ಬೆಳಗಿನ ಉಪಹಾರಕ್ಕೆ ಪ್ರತಿದಿನ ಒಂದೇ ರೀತಿಯ ದೋಸೆ, ಇಡ್ಲಿ ತಿಂದು ಬೇಜಾರಾಗಿದ್ದರೆ ಒಮ್ಮೆ ಈ ರುಚಿಕರ ಎಗ್ ದೋಸೆ ಟ್ರೈ ಮಾಡಿ. ಸರಳ ಪದಾರ್ಥಗಳಿಂದ ತಯಾರಿಸಬಹುದಾದ ಈ ಎಗ್ ದೋಸೆ ಹೊರಗೆ ಕ್ರಿಸ್ಪಿಯಾಗಿದ್ದು, ಒಳಗೆ ಮೃದುವಾದ ಮೊಟ್ಟೆಯ ಲೇಯರ್ನಿಂದ ಸಖತ್ ರುಚಿಯಾಗಿರುತ್ತದೆ. ತೆಂಗಿನಕಾಯಿ ಚಟ್ನಿ ಅಥವಾ ಸಾಂಬಾರ್ ಜೊತೆ ಬಿಸಿ ಬಿಸಿಯಾಗಿ ಸವಿದರೆ ರುಚಿ ಇನ್ನಷ್ಟು ಹೆಚ್ಚುತ್ತದೆ. ಎಗ್ ದೋಸೆಗೆ ಬೇಕಾಗುವ ಸಾಮಗ್ರಿಗಳು ಅಕ್ಕಿ ಹಿಟ್ಟು – 1 ಕಪ್ ಗೋಧಿ ಹಿಟ್ಟು – ½ ಕಪ್ ಮೊಟ್ಟೆ – 2 ಈರುಳ್ಳಿ – ½ ಕಪ್, ಸಣ್ಣಗೆ ಹೆಚ್ಚಿದ್ದು ಹಸಿಮೆಣಸಿನಕಾಯಿ – 2, ಸಣ್ಣಗೆ ಹೆಚ್ಚಿದ್ದು.