ಗಾಜನೂರಿನ ಡಾ. ರಾಜ್ಕುಮಾರ್ ಸಂಬಂಧಿ ಮನೆ ಬಳಿ ನಡೆದ ಸ್ಫೋಟ ನಾಡಬಾಂಬ್ ಅಲ್ಲ, ಪಟಾಕಿಎಂದು ತಮಿಳುನಾಡು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಆದರೆ, ಇದು ಕಚ್ಚಾ ಬಾಂಬ್ ದಾಳಿಯೇ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಟಾಕಿ ಸ್ಫೋಟವಾದರೆ ಮನೆಯ ಬಾಗಿಲು ಒಡೆದು ಹೋಗಲು ಸಾಧ್ಯವಿದೆಯಾ? ಗಾಜುಗಳೆಲ್ಲ ಪುಡಿ ಪುಡಿಯಾಗಿದೆ. ಬಾಗಿಲು ಚೂರಾಗಿದೆ, ಸೋಫಾಗೆ ಬೆಂಕಿ ತಗುಲಿದೆ. ಇದೆಲ್ಲ ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ. ಚಾಮರಾಜನಗರ, ನವೆಂಬರ್ 10: ತಮಿಳುನಾಡಿನ ಗಾಜನೂರಿನಲ್ಲಿರುವ ವರನಟ ಡಾ. ರಾಜ್ಕುಮಾರ್ ಅವರ ಸಂಬಂಧಿ ಮನೆಯಲ್ಲಿ ಸ್ಫೋಟ ಪ್ರಕರಣ ಸಂಬಂಧ ಈರೋಡ್ ಜಿಲ್ಲಾ ಪೊಲೀಸರು ಪತ್ರಿಕಾ ಪ್ರಕಟಣೆ ಮೂಲಕ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಸ್ಫೋಟಗೊಂಡಿರುವುದು ನಾಡಬಾಂಬ್ ಅಥವಾ ಕಚ್ಚಾ ಬಾಂಬ್ ಅಲ್ಲ.