ಭಾರತೀಯ ರೈಲ್ವೆ ಇಲಾಖೆಯು ಸರಕು ಸಾಗಣೆ ಹಾಗೂ ಪಾರ್ಸೆಲ್ ಸೇವೆಯನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸುವ ನಿಟ್ಟಿನಲ್ಲಿ ‘ರೇಲ್ ಪಾರ್ಸೆಲ್ ಆ್ಯಪ್ ಘರ್ ಸೆ ಘರ್ ತಕ್’ (ಮನೆ ಬಾಗಿಲಿಗೆ ಪಾರ್ಸೆಲ್ ಸೌಲಭ್ಯ) ಎಂಬ ಹೊಸ ಡಿಜಿಟಲ್ ಪ್ಲಾಟ್ಫಾರ್ಮ್ ಪರಿಚಯಿಸಲು ಸಜ್ಜಾಗುತ್ತಿದೆ. ಆಂಡ್ರಾಯ್ಡ್, ಐಒಎಸ್ ಹಾಗೂ ವೆಬ್ ಪ್ಲಾಟ್ಫಾರ್ಮ್ಗಳಿಗಾಗಿ ಈ ಆ್ಯಪ್ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಆ್ಯಪ್ ಮೂಲಕ ಗ್ರಾಹಕರು ರೈಲ್ವೆ ನಿಲ್ದಾಣಗಳಿಗೆ ಅಲೆಯದೆ, ಮನೆ ಬಾಗಿಲಿನಿಂದಲೇ ಪಾರ್ಸೆಲ್ ಬುಕಿಂಗ್, ಡೋರ್ಸ್ಟೆಪ್ ಪಿಕ್ಅಪ್ ಮತ್ತು ಡೆಲಿವರಿ ಹಾಗೂ ಡಿಜಿಟಲ್ ಪಾವತಿ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.