Dhanush: ಇತ್ತೀಚೆಗೆ ಬಿಡುಗಡೆಯಾಗಿರುವ ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಸಿನಿಮಾ ಭರ್ಜರಿ ಪ್ರರ್ದಶನ ಕಾಣುತ್ತಿದೆ. ಆದ್ರೆ ಸೀತಾ ಪಾತ್ರದಲ್ಲಿ ನಟಿಸಿದ ಸಾಯಿ ಪಲ್ಲವಿ ನಟನೆಗೆ ಕೆಲವರು ಆಕ್ಷೇ. ಆದ್ರೆ ಈಗ ತಮಿಳು ಖ್ಯಾತ ನಟ ಧನುಷ್ ಸಾಯಿ ಪಲ್ಲವಿಯನ್ನು ಸಮರ್ಥಿಸಿಕೊಂಡಿದ್ದಾರೆ.. ಚೆನ್ನೈನಲ್ಲಿ ನಡೆದ ತಮ್ಮ ಮುಂಬರುವ ಚಿತ್ರ ' ಓಂ' ಪ್ರಿ ರೀಲಿಸ್ ಇವೆಂಟ್ನಲ್ಲಿ ಸಾಯಿ ಪಲ್ಲವಿ ಅವರನ್ನು ನಟ ದನುಷ್ ಹೊಗಳಿದ್ದು, ಇಡೀ ಭಾರತದಾದ್ಯಂತ ಹುಡುಕಿದರೂ ಅವಳಂತಹ ಸೀತೆಯನ್ನು ಕಾಣಲು ಸಾಧ್ಯವಿಲ್ಲ ಎಂದು ಟ್ರೋಲಿಗರಿಗೆ ತಿರುಗೇಟು ನೀಡಿದ್ದಾರೆ. ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಸೀತೆಯ ಪಾತ್ರದಲ್ಲಿ ಆಕೆಯ ಅಭಿನಯದ ಬಗ್ಗೆ ಸಾಕಷ್ಟು ಚರ್ಚೆಗಳು, ಮಾತುಕತೆಗಳು ನಡೆಯುತ್ತಿವೆ.