Dangerous Diwali stunt: ದೀಪಾವಳಿ ಆಚರಣೆ ವೇಳೆ ನೆಟ್ಟಿಗರನ್ನು ಶಾಕ್ ಮಾಡುವಂಥ ವಿಡಿಯೋವೊಂದು ಎಕ್ಸ್ ಹಾಗೂ ಇನ್ಸ್ಟಾಗ್ರಾಮ್ನಲ್ಲಿ ಟ್ರೆಂಡ್ ಆಗ್ತಿದೆ. ಕಿಂಚಿತ್ತೂ ಭಯವಿಲ್ಲದೆ ಅಂಕಲ್ ಒಬ್ಬ. ಕಿಂಚಿತ್ತೂ ಭಯವಿಲ್ಲದೆ ಅಂಕಲ್ ಒಬ್ಬರು ಮಾಡಿದ ಅಪಾಯಕಾರಿ ಸ್ಟಂಟ್ ನೋಡಿ ಜನ ಹುಬ್ಬೇರಿಸಿದ್ದಾರೆ.‘ಹಬ್ಬದ ಸಂಭ್ರಮದ ನಡುವೆ ರಸ್ತೆಯಲ್ಲೇ ನಡೆದ ಈ ಸಾಹಸದ ವಿಡಿಯೋ ಈಗ ಟ್ರೆಂಡಿಂಗ್ನಲ್ಲಿದೆ. ಉರಿಯುವ ಮತ್ತು ಕಿಡಿ ಕಾರುವ ಪಟಾಕಿಯನ್ನು ತಲೆಯ ಮೇಲೆ ಹೆಲಿಕಾಪ್ಟರ್ನಂತೆ ವೇಗವಾಗಿ ತಿರುಗಿಸಿ ಅಂಕಲ್ ಒಬ್ಬರು ಮಾಡಿದ ಈ ಸ್ಟಂಟ್ ನೋಡಿ ಸೋಶಿಯಲ್ ಮೀಡಿಯಾ ಮಂದಿ ಕಂಗಾಲಾಗಿದ್ದಾರೆ. ನೆಟ್ಟಿಗರಂತೂ ಇದನ್ನು 'ದೀಪಾವಳಿ ಹೆಲಿಕಾಪ್ಟರ್ ಸ್ಟಂಟ್' ಅಂತಲೇ ವೈರಲ್ ಮಾಡುತ್ತಿದ್ದಾರೆ.